ಕೆನ್ನೆ ಭಾಷೆ

ನೀನು ನಕ್ಕಾಗ

ಕೆನ್ನೆ ಗುಳಿಗಳಿಗೆ
ಒಂದು ಮಾತು ಹೇಳಬೇಕನಿಸುತ್ತೆ:
ಇಂಥ ಚೆಂದದ ಭಾಷೆಯನ್ನು
ತಾರ್ಕಿಕವಾಗಿ ಮಂಡಿಸುವ
ನನ್ನ ಮೂರ್ಖತನಕ್ಕೆ
ನಾಚಿಕೆಯಾಗುತ್ತೆ !

Advertisements

ದೀಪದ ಹುಳ

ನಾನೇ ದೀಪವೆಂದು

ಇರುಳ ನಕ್ಷತ್ರವೆಂದು

ಬೀಗಲು ಪುರುಸೊತ್ತಿಲ್ಲ

ದಯವಿಟ್ಟು ದಾರಿಬಿಡಿ

ನಾನು ಮಿಂಚುಹುಳ

ರೈತ ಮತ್ತವನ ಪದ್ಯ

ರೈತ ಪದ್ಯ ಬರೆಯಲಾರ
ನಿಜವಾದ ಕವಿ ಅವನು!
ಹುಲ್ಲ ಬಣವೆಗಳಲ್ಲಿ ನಿಂತು ಕಾತರಿಸುವ
ಮುಂದಿನ ಬೆಳೆ ಹೇಗೆ?
ಗದ್ದೆಯ ಮಡುವಲ್ಲಿ ಹೊಸ ತೆನೆ ನಕ್ಕಾಗ
ಹೊಸಪದ್ಯದಮಲಿನಲ್ಲಿ ಮೈಮರೆಯುವಂತಿಲ್ಲ
ಕೆಸರು ಗದ್ದೆಗಳಲ್ಲಿ ಪದ್ಯ ಲಾಲಿ ಹಾಡುವುದಿಲ್ಲ…