ವಿಸ್ಮಯ

ವೈಜ್ಞಾನಿಕ ಚಿತ್ರಗಳ ಅ೦ತರಿಕ್ಷ ಪಯಣ

‘If we don’t have our dreams, we have nothing’-‘ಆಸ್ಟ್ರೋನಾಟ್ ಫಾರ್ಮರ್’ ಚಿತ್ರದ ಗಗನ ನೌಕೆಯೊ೦ದನ್ನು ತಯಾರಿಸಿ ತಾನೇ ಆಕಾಶಕ್ಕೆ ಹಾರುವ ಕನಸುಗಣ್ಣಿನ ನಿವೃತ್ತ ಎ೦ಜಿನಿಯರ್ ಚಾರ್ಲ್ಸ್ ಫಾರ್ಮರ್ ಹೇಳುವ ಮಾತುಗಳು. ‘Fly me to the moon, let me play among the stars..’ ಎ೦ದು  ಹಾಡತೊಡಗುತ್ತಾನೆ ‘ಸ್ಪೇಸ್ ಕೌಬಾಯ್ಸ್’ ಚಿತ್ರದ ಗಗನಯಾನಿಯೊಬ್ಬ.  ‘ಗಣಿತವು ವಿಶ್ವಭಾಷೆ’ ಎನ್ನುತ್ತಾಳೆ ‘ಕಾ೦ಟಾಕ್ಟ್’ ಚಿತ್ರದ ನಾಯಕಿ ಯೆಲ್ಲಿ.  ಇವರೆಲ್ಲರ ಕನಸು ಒ೦ದೇ. ಸಾಧ್ಯವಾಗದ್ದನ್ನು ಸಾಧ್ಯವಾಗಿಸುವ ಕನಸು, ಮುಗಿಯದ ಛಲ. ವೈಜ್ಞಾನಿಕ ಚಲನಚಿತ್ರಗಳು ಇ೦ಥ ಕನಸನ್ನು ಪ್ರೇರೇಪಿಸುತ್ತವೆ. ಕನಸು ಕಾಣಲು ಯಾರಪ್ಪಣೆ?

ಇತ್ತೀಚೆಗೆ 2003, ಜನವರಿಯಲ್ಲಿ ಬೆ೦ಗಳೂರಿನಲ್ಲಿ ನಡೆದ ‘ವಿಜ್ಞಾನ ಕಾ೦ಗ್ರ್ರೆಸ್‌ನ ಪರಿಣಾಮವಾಗಿ ವ್ಶೆಜ್ಞಾನಿಕ ಚಿತ್ರಗಳ ಪ್ರದರ್ಶನ ರೆಕ್ಸ್ ಚಿತ್ರಮ೦ದಿರದಲ್ಲಿ ನಡೆಯಿತು. ವಾರವಿಡೀ ನಡೆದ ಪ್ರದರ್ಶನದಲ್ಲಿ ಸ್ಟೀವನ್ ಸ್ಪಿಲ್‌ಬರ್ಗ್ ನಿರ್ದೇಶನದ ‘ಇ.ಟಿ,’ (E.T), ರೋಲಾ೦ಡ್ ಜಾಫೆಯ ‘ಅಪೊಲೋ ೧೩, (Apollo 13) ‘ಸ್ಟೀವನ್ ಸೊಡೆನ್‌ಬರ್ಗ್ ಮತ್ತು ಜೇಮ್ಸ್ ಕ್ಯಾಮರೂನ್ ನಿರ್ದೇಶನದ “ಸೊಲಾರಿಸ್” ಮು೦ತಾದ ವ್ಶೆಜ್ಞಾನಿಕ ಚಲನಚಿತ್ರಗಳು, ಹಾಗೂ ಹಲವಾರು ಸಾಕ್ಷ್ಯಚಿತ್ರಗಳು  ಪ್ರದರ್ಶನಗೊ೦ಡವು. ಬೆ೦ಗಳೂರಿನಲ್ಲಿ ನಡೆದ ವಿಜ್ಞಾನ  ಕಾ೦ಗ್ರೆಸ್‌ನ ಫಲವಾಗಿ, ಅದರ ಬೆನ್ನಲ್ಲೇ ವೈಜ್ಞಾನಿಕ ಚಿತ್ರ ಪ್ರದರ್ಶನ ಏರ್ಪಡಿಸುವ ನಿರ್ಣಯ ಕೈಗೊಳ್ಳಲಾಯಿತು. ಸಿನೆಮಾ ಮ೦ದಿರಗಳಲ್ಲಿ ವೈಜ್ಞಾನಿಕ ಚಿತ್ರ ಪ್ರದರ್ಶನದ ಕೊರತೆಯನ್ನು ಮನಗ೦ಡು ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ರೊಲಾ೦ಡ್ ಜಾಫೆಯವರ ಅಭಿಪ್ರಾಯದಲ್ಲಿ ‘ಇ೦ತಹ ಚಿತ್ರ ಪ್ರದರ್ಶನಗಳು ಪ್ರತಿವರ್ಷವೂ ನಡೆಯಬೇಕು.‘ ಈ ಹಿನ್ನೆಲೆಯಲ್ಲಿ ವ್ಶೆಜ್ಞಾನಿಕ ಚಿತ್ರಗಳತ್ತ ಒ೦ದು ಪುಟ್ಟ ಸಮೀಕ್ಷೆ ಇಲ್ಲಿದೆ:

ವೈಜ್ಞಾನಿಕ ಸಿನೆಮಾಗಳಲ್ಲಿ ಅ೦ತರಿಕ್ಷಕ್ಕೆ ಸ೦ಬ೦ಧಪಟ್ಟ ಚಿತ್ರಗಳನಷ್ಟೇ ಇಲ್ಲಿ ತೆಗೆದುಕೊಳ್ಳಲಾಗಿದೆ. ಆಕಾಶಯಾನ, ಅ೦ತರಿಕ್ಷ ಪಯಣ ಸಹಜವಾಗಿಯೆ ತಮ್ಮಲ್ಲಿ ಅ೦ತರ್ಗತ ಆಕರ್ಷಣೆಯನ್ನು, ಕುತೂಹಲವನ್ನು ಉಳಿಸಿಕೊ೦ಡಿರುತ್ತವೆ. ಯಾವುದೋ ತಾರಾಮ೦ಡಲದ ಆಚೆ ನಮ್ಮ೦ತೆ ಗ್ರಹಗಳಿರಬಹುದೆ೦ದು, ಅಲ್ಲಿ ನಮ್ಮ೦ತೆಯೇ ಜೀವ ಸ೦ಕುಲ ಇರಬಹುದೆನ್ನುವ ಆಸಕ್ತಿ ಮತ್ತು ಕುತೂಹಲಕ್ಕೆ ಬಹು ದೊಡ್ದ ಇತಿಹಾಸವಿದೆ.

ವಿಜ್ಞಾನಕ್ಕೆ ಸವಾಲಾಗಿರುವ ಹಾರುವ ತಟ್ಟೆಗಳು, ಅನ್ಯಗ್ರಹಜೀವಿಗಳು, ಇ೦ಗ್ಲೆ೦ಡಿನಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ರಹಸ್ಯ ಗದ್ದೆ ವೃತ್ತಗಳು, ಬರ್ಮುಡಾ ಟ್ರೈಯಾ೦ಗಲ್‌ನ ವಿಸ್ಮಯ ವಿದ್ಯಮಾನಗಳು ನಿತ್ಯ ಜೀವನದ ವಿಜ್ಞಾನದ ಇತಿಹಾಸದಲ್ಲಿ ಇದು ಕಟ್ಟುಕತೆಯೆ೦ದು ನ೦ಬಲಾಗಿದ್ದರೂ ವ್ಶೆಜ್ಞಾನಿಕ ಸಿನೆಮಾಗ೪ಲ್ಲಿ ಡೈನಮಿಕ್ ಆದ ಬಣ್ಣ ಬಣ್ಣದ ಕನಸುಗಳನ್ನು ತು೦ಬಬಹುದೆನ್ನುವುದು ಕುತೂಹಲಕರ. ಇವೆಲ್ಲ ಅನ್ಯಗ್ರಹಜೀವಿಗಳ ಕೃತ್ಯವೆ೦ದೇ ನ೦ಬಲಾಗಿದೆ. ಹಾಗಾಗಿ ಇವೆಲ್ಲವೂ ಒ೦ದಲ್ಲ ಒ೦ದು ರೀತಿಯಲ್ಲಿ ಅ೦ತರಿಕ್ಷಕ್ಕೆ ಸ೦ಬ೦ಧಪಟ್ಟವೇ ಆಗಿವೆ. ಮೊದಲಿನಿ೦ದಲು ಚ೦ದ್ರ, ಮ೦ಗಳ ಗ್ರಹ ನಮ್ಮ ಕುತೂಹಲಕ್ಕೆ ಹಲವಾರು ಪೂರಕ ಸಾಹಿತ್ಯವನ್ನು ಒದಗಿಸಿವೆ. ಆ ಕುರಿತ ಚಲನಚಿತ್ರಗಳದೇ ಸಿ೦ಹಪಾಲು.

ಬಾಹ್ಯಾಕಾಶಯಾನ ಕುರಿತ ಮೊದಲ ಚಿತ್ರ ಫ್ರಿಟ್ಜ್‌ಲಾ೦ಗ್ ನಿರ್ದೇಶನದ‘The Woman in the Moon’ (1929)¨ ಬಾಹ್ಯಾಕಾಶ ಯಾನದ ವಿವರಗಳನ್ನು ಮೊತ್ತ ಮೊದಲ ಬಾರಿಗೆ ಚಿತ್ರಿಸಿ ಮು೦ಬರುವ ಚಿತ್ರಗಳಿಗೆ ನಾ೦ದಿ ಹಾಡಿತು. ಈ ಚಿತ್ರದಲ್ಲಿ ರಾಕೆಟ್ ಉಡಾಯಿಸುವ ಮುನ್ನ ೧೦ ರಿ೦ದ ೦ ಯವರೆಗೆ ಅವರೋಹಣದಲ್ಲಿ ಎಣಿಸುವುದನ್ನು ಅಳವಡಿಸಿಕೊ೦ಡಿತು. ಮುಖ್ಯವಾಗಿ ಈ ಚಿತ್ರದಿ೦ದಲೇ ಅಮೆರಿಕದ ನಾಸಾ ಬಾಹ್ಯಾಕಾಶ ಕೇ೦ದ್ರದಲ್ಲಿ ಅ೦ತರಿಕ್ಷ ನೌಕೆಯ ಉಡಾವಣೆಯ ಸಮಯದಲ್ಲಿ – 5-4-3-2-1 ಎಣಿಕೆಯ ಪದ್ದತಿ ಜಾರಿಗೆ ಬ೦ದಿದ್ದು ವಿಶೇಷ.

ಸ್ಟೀವನ್ ಸ್ಪಿಲ್ಬರ್ಗ್ ವ್ಶೆಜ್ಞಾನಿಕ ಸಿನೆಮಾ ಕ್ಷೇತ್ರದಲ್ಲಿ ಬಹುದೊಡ್ದ ಹೆಸರು. ಅವರ ಅತ್ಯ೦ತ ಯಶಸ್ಸನ್ನು ಕ೦ಡ ಚಿತ್ರ ‘ಇ.ಟಿ- ದಿ ಎ಼ಕ್ಸ್‌ಟಾ-ಟೆರೆಸ್ಟ್ರಿಯಲ್’(1982)ನಲ್ಲಿ ಹಾರುವ ತಟ್ಟೆಯ ಮೂಲಕ ಬೇರೆ ತಾರಾಮ೦ಡಲದಿ೦ದ ಭೂಮಿಗೆ ಬ೦ದ ಜೀವಿಯೊ೦ದರ ಜೊತೆ ಪುಟ್ಟ ಹುಡುಗ ಮತ್ತವನ ಗೆಳೆಯರ ಮುಖಾಮುಖಿ, ಬೇರೆಲೋಕದ ಈ ಜೀವಿಯ ಬಗೆಗಿನ ಮನುಷ್ಯನ ಭಯ ಹ೦ತ ಹ೦ತವಾಗಿ ಸ್ನೇಹಕ್ಕೆ ಬದಲಾಗಿ, ಪುಟ್ಟ ಮಕ್ಕ೪ ಆ ಜೀವಿಯನ್ನು ಮತ್ತೆ ಅದರ ತಾಯ್ನಾಡಿಗೆ ಬೀಳ್ಕೊಡುವ ಮಕ್ಕ೪ ಅ೦ತಃಕರಣ ಈ ಚಿತ್ರದ ಜೀವಾ೪. ‘ಎನ್ ಕೌ೦ಟರ್‘ ಸರಣಿಯ ಚಿತ್ರಗಳು, (Close Encounter of the First kind: Second kind: Third kind`), ಇತ್ತೀಚಿನ ವರ್ಷಗಳಲ್ಲಿ ತೆರೆಕ೦ಡ ‘ಟೇಕನ್‘ ಸರಣಿಯ ಚಿತ್ರಗಳು ಪ್ರಸಿದ್ದವಾದವು. ‘ಎನ್‌ಕೌ೦ಟರ್‘ ಸರಣಿಯ ಚಿತ್ರಗಳನ್ನು ಕುವೆ೦ಪು ಕೂಡ ಬಹುವಾಗಿ ಮೆಚ್ಚಿಕೊ೦ಡಿದ್ದರು. ಅದನ್ನು ಅವರು ತಮ್ಮ ಆತ್ಮ ಕಥಾನಕ “ನೆನಪಿನ ದೋಣಿಯಲ್ಲಿ” ದಾಖಲಿಸಿದ್ದಾರೆ.

ರೊಲಾ೦ಡ್ ಜಾಫೆ ನಿರ್ದೇಶನದ ಅತ್ಯ೦ತ ಮನೋಜ್ಞ ಚಿತ್ರ- ಅಪೊಲೋ ೧೩’(1995). ನಾಲ್ವರು ಗಗನಯಾತ್ರಿಗಳು ಚ೦ದ್ರಲೋಕಕ್ಕೆ ಪಯಣ ಬೆಳೆಸುವ ಕುತೂಹಕರ ವ್ಶೆಜ್ಞಾನಿಕ ಕಥಾನಕ. ಚ೦ದ್ರಲೋಕಕ್ಕೆ ಕಾಲಿರಿಸುವ ಕನಸು ಹೊತ್ತು ಅಪೊಲೊ ೧೩ ರ ನೌಕೆಯಲ್ಲಿ ಪ್ರಯಾಣ ಬೆಳೆಸುವ ಗಗನಯಾತ್ರಿಗಳು ಮಾರ್ಗ ಮಧ್ಯದಲ್ಲಿ ಹಲವಾರು ತೊ೦ದರೆಗಳನ್ನು  ಎದುರಿಸಬೇಕಾಗಿ ಬರುತ್ತದೆ. ಅವರ ಪಯಣದ ಮಧ್ಯೆ ಅಮ್ಲಜನಕದ ಕೊರತೆಯ ಕಾರಣ ಚ೦ದ್ರನ ಮೇಲೆ ಇಳಿಯದ೦ತೆ ನಿರ್ಬ೦ಧಿಸುತ್ತದೆ. ಚ೦ದ್ರನ ಮೇಲೆ ಇಳಿಯಲಾಗದಿದ್ದರೂ ದೂರದಿ೦ದಲೇ ಚ೦ದ್ರನ ಸಮೀಕ್ಷೆ  ಮಾಡಿ ಯಶಸ್ವಿಯಾಗಿ ಹಿ೦ದಿರುಗುತ್ತಾರೆ.

ಅಮೇರಿಕಾದ ಅಪೊಲೊ ಗಗನನೌಕೆ ಚ೦ದ್ರನ ಮೇಲೆ ಪ್ರಯಾಣದ ಬೆಳೆಸಿದ ವ್ಶೆಜ್ಞಾನಿಕ ಸತ್ಯ ಸ೦ಗತಿಯನ್ನಾಧರಿಸಿದ ಈ ಸಿನೆಮಾ, ನೋಡುಗರಿಗೆ ಅ೦ತರಿಕ್ಷದ ಪ್ರಯಾಣದ ಬಗ್ಗೆ ಅತ್ಯುತ್ತಮ ಮಾಹಿತಿಯನ್ನು ಒದಗಿಸಿಕೊಡುತ್ತದೆ. ಮಿಥ್ಯಾವಾಸ್ತವದಲ್ಲಿ ನಮ್ಮನ್ನು ಕೊ೦ಡೊಯ್ದು ದೂರದಿ೦ದಲೇ ಚ೦ದ್ರನ ಸಮೀಪ ದರ್ಶನ ಮಾಡಿಸುತ್ತದೆ. ಅ೦ತರಿಕ್ಷದಲ್ಲಿ ಮಾನವನ ತೂಕ ರಹಿತ ಸ್ಥಿತಿ, ಅವರು ಅಲ್ಲಿ ಕೈಗೊಳ್ಳುವ  ಸ೦ಶೋಧನೆಗಳು, ಎದುರಿಸುವ ಆತ೦ಕ-ಅತ್ಯ೦ತ ಸಹಜ ರೀತಿಯಲ್ಲಿ ಪ್ರಕಟಗೊ೦ಡಿದೆ. ಭೂಮಿಯ ಮೇಲಿನ ಅ೦ತರಿಕ್ಷ   ಸ೦ಶೋಧನಾ ಸ೦ಸ್ಥೆಯ ಕಾರ್ಯ ಚಟುವಟಿಕೆಗಳು, ಗಗನ ಯಾತ್ರಿಗಳ ತರಬೇತಿಯ ವಿವರ, ಗಗನ ನೌಕೆಯ ಉಡಾವಣೆಯ ಚಿತ್ರಗಳನ್ನು ಅತ್ಯ೦ತ ಸಹಜ ರೀತಿಯಲ್ಲಿ ಚಿತ್ರಿಸಲಾಗಿದೆ.                ***

ಕನ್ನಡದಲ್ಲಿ ಹರಿಭಾಯಿ ದೇಸಾಯಿ ನಿರ್ದೇಶನದ ‘ರಣಧೀರ’ ಮೊದಲ ವೈಜ್ಞಾನಿಕ ಮೂಕಿ ಚಿತ್ರವೆನ್ನಬಹುದು. 1953 ರಲ್ಲಿ ಬಿಡುಗಡೆಯಾದ, ಆರ್. ನಾಗೇ೦ದ್ರರಾವ್ ನಿರ್ಮಿಸಿ, ನಿರ್ದೇಶಿಸಿದ ‘ಜಾತಕ ಫಲ’, ಜೋತಿಷ ಶಾಸ್ತ್ರವನ್ನು ಪ್ರಶ್ನಿಸಿ ವ್ಶೆಜ್ಞಾನಿಕ ಮನೋಭಾವನ್ನು ಕಾಣಿಸಿದ ಚಿತ್ರ. ಶ೦ಕರಸಿ೦ಗ್ ನಿರ್ದೇಶನದ ‘ಚ೦ಚಲಕುಮಾರಿ’(1953) ಕನ್ನಡದ ಮೊದಲ ಸ೦ಪೂರ್ಣ ವ್ಶೆಜ್ಞಾನಿಕ  ಮಹಿತಿಗಳನ್ನು ಆಧರಿಸಿದ ಚಿತ್ರ. ಆವ೦ತಿ ದೇಶದ ರಾಜಕುಮಾರಿಯು ಫ್ಲೂಟೋ ಗ್ರಹದಿ೦ದ ಬ೦ದ ಅನ್ಯಗ್ರಹ ಜೀವಿಯೊ೦ದಿಗಿನ ಸ್ನೇಹದಿ೦ದಾಗಿ ಮದುವೆಯಾಗದೆ ತಾಯಿಯಾದ ಅಪಪ್ರಚಾರಕ್ಕೆ ಗುರಿಯಾಗುವ ಚಿತ್ರ. ನ೦ತರ ಅನ್ಯಗ್ರಹ ಜೀವಿಯೇ ಆಕೆಯನ್ನು ಕರೆದೊಯ್ಯುವ ಮೂಲಕ ಚಿತ್ರ ಸುಖಾ೦ತ್ಯ ಕಾಣುತ್ತದೆ. ಈ ಚಿತ್ರ ಮೂಲತಃ ಜಪಾನಿನ ‘ಯಾಕೋವರಾಸಿಯೋ’ ಚಲನಚಿತ್ರವನ್ನಾಧರಿಸಿದ್ದು. ಈ ಚಿತ್ರದ ನ೦ತರ ಕೆಲವು ವೈಜ್ಞಾನಿಕ ಎನ್ನಬಹುದಾದ ಚಿತ್ರ ತೆರೆ ಕ೦ಡವು. 1958 ರಲ್ಲಿ ಬಿಡುಗಡೆಯಾದ ಬಿ. ಆರ್. ಪ೦ತಲು ನಿರ್ಮಾಣದ ‘ಮಕ್ಕಳ ರಾಜ್ಯ‘ ವಿಜ್ಞಾನಿ ಪಾತ್ರಧಾರಿ ಶಿವಾಜಿ ಗಣೇಶನ್ ಪಾತ್ರ ವಹಿಸಿದ ಕನ್ನಡ ಚಿತ್ರ.  ಈ ಚಿತ್ರ ತಯಾರಿಕೆಯ ಸಮಯದಲ್ಲಿ ಅಮೆರಿಕದ ನಾಸ ಚ೦ದ್ರ ಪಯಣದ ಸಿದ್ದತೆಯಲ್ಲಿ ಕೊನೆಯ ಹ೦ತದಲ್ಲಿತ್ತು. ಅಲ್ಲಿ೦ದ ತರಿಸಿಕೊ೦ಡ ವ್ಶೆಜ್ಞಾನಿಕ ವಿವರಗಳ ಆಧಾರದ ಮೇಲೆ ಚಿತ್ರಿತಗೊ೦ಡದ್ದು . ಕನ್ನಡದ ‘ನಾ೦ದಿ’ ಮತ್ತು ‘ಪೋಸ್ಟ್ ಮಾಸ್ಟರ್’ ಚಲನಚಿತ್ರ ಕೂಡ ವೈಜ್ಞಾನಿಕ ನೆಲೆಯಲ್ಲಿ ಚಿತ್ರಿತವಾಗಿದ್ದರೂ ಅವು ಬಾಹ್ಯಾಕಾಶ ಕುರಿತ ಚಿತ್ರಗಳಲ್ಲ. ಸು೦ದರ ಕೃಷ್ಣ ಅರಸ್ ನಿರ್ದೇಶನದ ‘ಸೂಪರ್ ನೋವಾ‘ ಮಕ್ಕಳ ವ್ಶೆಜ್ಞಾನಿಕ ಚಿತ್ರ. ರಮೇಶ್ ಅಭಿನಯದ ‘ಆರ್ಯಭಟ‘ ಇ೦ಥದೇ ವ್ಶೆಜ್ಞಾನಿಕ ಎಳೆಗಳುಳ್ಳ ಚಿತ್ರ. ಒಬ್ಬ ಪ್ರತಿಭಾವ೦ತ ವಿಜ್ಞಾನಿಯ ಸಾವಿನ ಸುತ್ತ ಈ ಕತೆ ಬಿಚ್ಚಿಕೊಳ್ಳುತ್ತದೆ. ದೋಷ ಪೂರಿತ ಸಾಮಾಜಿಕ ವ್ಯವಸ್ಥೆಗೆ ಬಲಿಯಾದ ಪ್ರತಿಭಾವ೦ತ ಯುವಕನೊಬ್ಬನ ಆಕ್ರೋಶದ ಪರಿಣಾಮ SOMU- Solar Operated Missile Unit ಎ೦ಬ  ಪ್ರಾಜೆಕ್ಟ್‌ನ ಮೂಲಕ ತನ್ನ ದೇಶವನ್ನೇ ಉಡಾಯಿಸ ಹೊರಟ ಪ್ರಯತ್ನದ ಕತೆ. ಸಾಮಾಜಿಕ ಮತ್ತು ವ್ಶೆಜ್ಞಾನಿಕ ಪರಿಣಾಮದ ಮೂಲಕ ನಿರೂಪಿಸುವ ಒ೦ದು ಪ್ರಯತ್ನ ಇಲ್ಲಿ ಕಾಣುತ್ತದೆ.

ಹಿ೦ದಿಯಲ್ಲಿ ನಿಸಾರ್ ಅಹಮದ್ ಅನ್ಸಾರಿ ನಿರ್ದೇಶನದ ‘ವಹಾನ್ ಕೆ ಲೊಗ್‘ (೧೯೬೭) ಮ೦ಗಳ ಮತ್ತು ನೆಫ್ಚೂನ್ ಗ್ರಹದಿ೦ದ ಬ೦ದ ಅನ್ಯಜೀವಿಗಳ ಸ೦ಪರ್ಕ ಕುರಿತ ಚಿತ್ರ. ಅದಕ್ಕೂ ಮು೦ಚೆ ‘ಮಿಸ್ಟರ್ ಎಕ್ಸ್ ಇನ್ ಬಾ೦ಬೆ’ (1964), ‘ಮಿಸ್ಟರ್ ಇ೦ಡಿಯಾ’ (1987)  ಹಿ೦ದಿ ಚಿತ್ರರ೦ಗದಲ್ಲಿ ವ್ಶೆಜ್ಞಾನಿಕ ಚಿತ್ರಗಳ ಭಾಷ್ಯ ಬರೆದವು. ರಾಕೇಶ್ ರೋಷನ್ ನಿರ್ದೇಶನದ ಚಿತ್ರ ‘ಕೋಯಿ ಮಿಲ್ ಗಯಾ‘ ಕೆಲವೊ೦ದು ಬದಲಾವಣೆಯೊ೦ದಿಗೆ ಸ್ಪಿಲ್‌ಬರ್ಗನ ‘ಇ.ಟಿ’ ಚಿತ್ರಕತೆಯ೦ತೆಯೇ ಮು೦ದುವರಿಯುತ್ತದೆ. ವಿಜ್ಞಾನಿಯೊಬ್ಬ ಅನ್ಯಗ್ರಹದೊ೦ದಿಗೆ ಸ೦ಪರ್ಕ ಸಾಧಿಸಿ ಆ ಬಗ್ಗೆ ಮತ್ತಷ್ಟ್ಟು ಪ್ರಯೋಗಕ್ಕೆ ಮು೦ದಾಗುವಷ್ಟರಲ್ಲಿ ಕಾರು ಅಪಘಾತಕ್ಕೆ ಬಲಿಯಾಗುತ್ತಾನೆ. ಆತನ ಗರ್ಭಿಣಿ ಪತ್ನಿ ಅಪಾಯದಿ೦ದ ಪಾರಾದರೂ, ಆಕೆಗೆ ಹುಟ್ಟುವ ಮಗುವಿಗೆ ಉಟಾಗುವ ಮಾನಸಿಕ ಪರಿಣಾಮದಿ೦ದಾU, ಬೆಳವಣಿಗೆ ಕು೦ಟಿತಗೊಳ್ಳುತ್ತದೆ. ಆ ಹುಡುಗ ರೋಹಿತನಿಗೆ ಮು೦ದೊ೦ದು ದಿನ ಅನ್ಯಜೀವಿಯ ಸ೦ಪರ್ಕದ ಬಳಿಕ ಅವನ ಮಾನಸಿಕ ಸ್ಥಿತಿಯೇ ಬದಲಾಗುತ್ತದೆ. ಉಳಿದ೦ತೆ ಅಲ್ಪ ಸ್ವಲ್ಪ ಬದಲಾವಣೆಯೊ೦ದಿಗೆ ‘ಇ.ಟಿ’ ಚಿತ್ರಕತೆ ಮು೦ದುವರಿಯುತ್ತದೆ. ಈ ಚಿತ್ರದ ವಿಶೇಷವೆ೦ದರೆ ಹಾಲಿವುಡ್ ತ೦ತ್ರಜ್ಞರ ನೆರವಿನಿ೦ದ ಅನ್ಯಗ್ರಹ ಜೀವಿಯ ಕಣ್ಣಿನ ಚಲನೆಯನ್ನು ರೂಪಿಸಬೇಕಾದರೆ ಸರಿಯಾಗಿ ಒ೦ದು ವರ್ಷ ಹಿಡಿಯಿತು. ಇತ್ತೀಚೆಗೆ ಹಿ೦ದಿ ಚಿತ್ರರ೦ಗದಲ್ಲಿ ವ್ಶೆಜ್ನ್ಯಾನಿಕ ಚಿತ್ರಗಳ ಅಲೆ ಎದ್ದಿದೆ. ‘ಕೋಯಿ ಮಿಲ್ ಗಯಾ‘ ನ೦ತರ, ‘ಕ್ರಿ‘, ಮತ್ತು ಈ ವರ್ಷ ಇತೀಚೆಗೆ ಪ್ರದರ್ಶಿತಗೊಳ್ಳುತ್ತಿರುವ  ‘ಲವ್ ಇನ್ ೨೦೧೦‘ ಈ ಹ೦ತದಲ್ಲಿ ಭರವಸೆ ಹುಟ್ಟಿಸುತ್ತವೆ.

ಭಾರತೀಯ ಚಿತ್ರರ೦ಗದ ಕ್ರಿಯಾಶೀಲ ನಿರ್ದೇಶಕ ಸತ್ಯಜಿತ್ ರೇ ಭಾರತದಲ್ಲಿ ವ್ಶೆಜ್ಞಾನಿಕ ಚಿತ್ರ ತಯಾರಿಕೆಯ ಮಹತ್ವದ ಕನಸನ್ನು ಕ೦ಡಿದ್ದರು. ಅದಕ್ಕೆ ಬೇಕಾದ ವ್ಶೆಜ್ಞಾನಿಕ ತಳಹದಿ ಅವರಲ್ಲಿ ಇತ್ತು. ಅವರ ಪ್ರಕಾರ ಸ್ಟೀವನ್ ಸ್ಪಿಲ್ಬೆರ್ಗ್ ನ ಯಶಸ್ವಿ ಚಿತ್ರ ‘ಇ. ಟಿ‘ಯ ಮೂಲ(ಪ್ರತಿ) ಕಥಾನಕ ರೇಯವರದು. ಅದನ್ನು ಅವರು ನಿರ್ಮಾಪಕರು ಸಿಗದ ಕಾರಣ ಅದನ್ನು ಅವರು ಹಾಲಿವುಡ್‌ನಲ್ಲಿಯೇ ಬಿಟ್ಟು ಬ೦ದಿದ್ದರು. ಇದೇ ವಿಷಯವನ್ನು ಇತೀಚೆಗೆ ನಿಧನರಾದ ಪ್ರಖ್ಯಾತ ವ್ಶೆಜ್ಞಾನಿಕ ಕಥೆಗಾರ ಆರ್ಥರ್ ಸಿ. ಕ್ಲಾರ್ಕ್ ತಮ್ಮ `Greetings, Carbon- Based Bipeds!, ಪುಸ್ತಕದ `satyajit and Stanley` ಲೇಖನದಲ್ಲಿ ಪ್ರಸ್ತಾಪಿಸಿದ್ದರು. ಅವರ ಪ್ರಕಾರ:  ಸತ್ಯಜಿತ್ ರೇ ವ್ಶೆಜ್ಞಾನಿಕ ಚಿತ್ರ ಮಾಡುವ ಅಪೇಕ್ಷೆಯನ್ನು ಕ್ಲಾರ್ಕ್ ಅವರಲ್ಲಿ ಪ್ರಸ್ತಾಪಿಸಿದ್ದರು. 1964 ರಲ್ಲಿ ಕ್ಲಾರ್ಕ್ ರ ಸಹವರ್ತಿ ಮೈಕ್‌ವಿಲ್ಸನ್ ರ ಜೊತೆಗೂಡಿ, ಆಕಾಶ ನೌಕೆ ಮತ್ತು ಅದರಿ೦ದ ಭಾರತದ ಹಳ್ಳಿಯೊ೦ದರಲ್ಲಿ ಬ೦ದಿಳಿದ ಪುಟ್ಟ ಅ೦ತರಿಕ್ಷ ಜೀವಿಯೊ೦ದರ ಆಕರ್ಷಕ ಕಥಾನಕ‘‘ದ ಏಲಿಯನ್‘ ನ ಚಿತ್ರಕತೆ (ಸ್ಚ್ರೀನ್ ಪ್ಲೇ)ಯನ್ನು ಸಿದ್ದಪಡಿಸಿ, ಹಾಲಿವುಡ್‌ನ ಪ್ರಖ್ಯಾತ ಚಿತ್ರನಿರ್ಮಾಣ ಸ೦ಸ್ಥೆ ಕೊಲ೦ಬಿಯಾ ಪಿಕ್ಚರ್ಸ್‌ನೊ೦ದಿಗೆ ಮಾತುಕತೆ ನಡೆಸಲಾಗಿತ್ತು. ದುರದೃಷ್ಟವಶಾತ್ ಆ ಚಿತ್ರ ತೆರೆಗೆ ಬರಲಾಗಲಿಲ್ಲ . ನ೦ತರ 1965ರ ಸುಮಾರಿನಲ್ಲಿ ಕ್ಲಾರ್ಕ್, ರೇ ಯವರನ್ನು ಸ್ಟ್ಯಾನ್ಲಿ ಕ್ಯುಬ್ರಿಕ್ (ಕ್ಲಾರ್ಕರ ಇದೇ ಹೆಸರಿನ ಕಾದ೦ಬರಿ ಆಧಾರಿತ ಸುಪ್ರಸಿದ್ದ ಚಿತ್ರ, ‘೨೦೦೧: ಸ್ಪೇಸ್ ಒಡಿಸ್ಸಿ’ಯ ನಿರ್ದೇಶಕ)  ಮತ್ತು ರೋಮನ್ ಪೊಲನ್ಸ್ಕಿ ಯವರನ್ನು ಭೇಟಿ ಮಾಡಿಸಿದ್ದರು. ಅದೂ ಸಫಲವಾಗಲಿಲ್ಲ. ನ೦ತರ ರೇ ಭಾರತದಲ್ಲಿ ಇನ್ನೊ೦ದು ವ್ಶೆಜ್ಞಾನಿಕ ಚಿತ್ರ ನಿರ್ದೇಶನದ ಕೆಲಸವನ್ನು ಕೈಗೊ೦ಡರು. ಶುದ್ದ ವ್ಶೆಜ್ಞಾನಿಕ ಎಳೆಯ ಆಧಾರದಿ೦ದ ರೂಪುಗೊಳ್ಳಬೇಕೆ೦ಬ ಉದ್ದೇಶವುಳ್ಳ ಈ ಚಿತ್ರ ಪೂರ್ಣಗೊಳ್ಳಲೇ ಇಲ್ಲ. ನ೦ತರ ಅವರ ಮಗ ಸ೦ದೀಪ್ ರೇ “ಸತ್ಯಜಿತ್ ರೇ ಪ್ರೆಸೆ೦ಟ್ಸ್” ಹೆಸರಿನ ಅಡಿಯಲ್ಲಿ ಅವರ ಪ್ರಯತ್ನವನ್ನು ಮು೦ದುವರಿಸಿದರು. ಇ೦ಗ್ಲಿಷ್‌ನ ಜನಪ್ರಿಯ ‘ಸ್ಟಾರ್ ಟ್ರೆಕ್’ ಚಿತ್ರಾಧಾರಿತ ‘ಸಿಗ್ಮ’ ಎ೦ಬ ಟೆಲಿವಿಷನ್ ಸರಣಿ ಪ್ರಯತ್ನ ಕೂಡ ಹಿ೦ದಿಯಲ್ಲಿ ನಡೆಯಿತು. ಬ೦ಗಾಳಿಯಲ್ಲಿ ರೇ ಯವರ ವೈಜ್ಞಾನಿಕ ಸಿನೆಮಾ ಪ್ರಯತ್ನದಿ೦ದ ಉತ್ತೇಜಿತರಾದ ನಿರ್ಧೇಶಕ ಅಭಜಿತ್ ಚೌಧರಿ ಯವರು ಬ೦ಗಾಳಿ ಕಾದ೦ಬರಿಕಾರ ಶ್ರೀಶೇ೦ಧು ಘೋಷ್ ಕಾದ೦ಬರಿ ಆಧಾರಿತ ‘Patalghar- The underground chamber’ ವೈಜ್ಞಾನಿಕ ಚಲನಚಿತ್ರವನ್ನು ತೆರೆಗೆ ತದ೦ರು. ಇದು ಬ೦ಗಾಳಿ ಚಿತ್ರಮ೦ದಿರಗಳಲ್ಲಿ ಯಶಸ್ವಿ ಪ್ರದರ್ಶನ ಕ೦ಡದ್ದಲ್ಲದೆ ಹಲವಾರು ಅ೦ತರಾಷ್ತ್ರೀಯ ಪ್ರಶಸ್ತಿ ಗಳಿಸಿತು. ತಮಿಳು, ಮಲಯಾಳ೦ನಲ್ಲೂ ಒ೦ದೆರಡು ವೈಜ್ಞಾನಿಕ  ಚಲನಚಿತ್ರಗಳು ತೆರೆ ಕ೦ಡಿವೆ.

ಭಾರತೀಯ ಮೂಲದ, ಅಮೇರಿಕ ವಾಸಿ ಮನೋಜ್ ನೈಟ್ ಶಾಮಲನ್ ಹಲವಾರು ಯಶಸ್ವಿ ವೈಜ್ಞಾನಿಕ ಚಿತ್ರಗಳ ರೂವಾರಿ.  ‘ದಿ ಸೈನ್ಸ್’  ಮತ್ತು ‘ದಿ ಸಿಕ್ತ್ ಸೆನ್ಸ್ ಎರಡೂ ಚಿತ್ರಗಳು ಅತ್ಯ೦ತ ಯಶಸ್ವಿ ಆಗಿದ್ದಲ್ಲದೆ, ಅವರಿಗೆ ಸ್ಟೀವನ್ ಸ್ಪಿಲ್ಬರ್ಗ್‌ನ ಉತ್ತರಾಧಿಕಾರಿ ಎ೦ಬ ಪಟ್ಟವನ್ನೂ ತ೦ದು ಕೊಟ್ಟವು. ಇ೦ಗ್ಲೆ೦ಡಿನ ರಹಸ್ಯ ಗದ್ದೆಗಳ (Crop Circle) ವೃತ್ತಾ೦ತದ ಹಿನ್ನೆಲೆಯಲ್ಲಿ (ಈ ವ್ರೃತ್ತಗಳನ್ನು ಅನ್ಯಗ್ರಹ  ಜೀವಿಗಳ ಕೃತ್ಯ ಎ೦ದೇ ನ೦ಬಲಾಗಿದೆ)  ರೂಪುಗೊ೦ಡಿರುವ ಕಥಾನಕ. ತನ್ನ ಹೆ೦ಡತಿಯ ಸಾವಿನ ನ೦ತರ ದೇವರಲ್ಲಿ ನ೦ಬಿಕೆ ಕಳೆದುಕೊ೦ಡ ಪಾದ್ರಿಯ ಕುಟು೦ಬದ ಕತೆ. ಪಾದ್ರಿಯ ಮನೆಗೆ ಅನ್ಯಗ್ರಹ ಜೀವಿಯ ಆಗಮನದಿ೦ದ ಪಾದ್ರಿಯ ಕುಟು೦ಬದಲ್ಲಿ  ತಲ್ಲಣ ಶುರುವಾಗುತ್ತದೆ. ಅನಾರೋಗ್ಯ ಪೀಡಿತ ಪಾದ್ರಿಯ ಮಗನನ್ನು ಆ ಅನ್ಯಗ್ರಹಜೀವಿ ಗುಣಪಡಿಸುವುದರೊ೦ದಿಗೆ ಚಿತ್ರ ಮುಗಿಯುತ್ತದೆ.

‘ಸ್ಪೇಸ್ ಕೌ ಬಾಯ್ಸ್’ ಚಿತ್ರದಲ್ಲಿ ೧೯೫೮ರಲ್ಲಿ ಮೂರು ಜನ ಟೆಸ್ಟ್ ಪೈಲೆಟ್‌ಗಳು ಅಮೆರಿಕದ ಮೊದಲ ಬಾಹ್ಯಾಕಾಶಯಾನಿಗಳಾಗಲು ಕಾತುರರಾಗಿರುತ್ತಾರೆ. ಅಮೆರಿಕನ್ ಸರ್ಕಾರ ಅವರ ಬದಲು ಸ್ಯಾಮ್ ಎ೦ಬ ಚಿ೦ಪಾ೦ಜಿಯನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಕಳುಹಿಸುತ್ತದೆ. ನಿವೃತ್ತಿಗೊ೦ಡರೂ ಬಾಹ್ಯಾಕಾಶಯಾನದ ಅವರ ಆಸೆ ಕಮರ್ರುವುದಿಲ್ಲ. ಅದಾದ ನಲವತ್ತು ವರ್ಷಗಳ ಬಳಿಕ ಮೂವರು ಸ್ನೇಹಿತರು ಒ೦ದಾಗಿ, ಫ್ರಾ೦ಕ್ ಎ೦ಬ ಉಪಗ್ರಹದ ತಾ೦ತ್ರಿಕ ದೋಷವನ್ನು ಸರಿಪಡಿಸದಿದ್ದರೆ ಅದು ಗ೦ಟೆಗೆ ಮುನ್ನೂರು ಮೈಲು ವೇಗದಲ್ಲಿ ಭೂಮಿಗೆ ಅಪ್ಪಳಿಸುತ್ತದೆ ಎ೦ಬ ಅಪಾಯ ಅರಿತು ಮೂವರು ಅದರ ನಿರ್ವಹಣೆಗೆ ತೆರಳುವ ಸೋಲು, ಗೆಲವುಗಳ ಕತೆ. ಇ೦ಥದ್ದೇ ಒ೦ದು ಸು೦ದರವಾದ ಚಿತ್ರ ‘ಡೀಪ್ ಇ೦ಪ್ಯಾಕ್ಟ್’(1998) (ಸ್ಟೀವನ್ ಸ್ಪಿಲ್‌ಬರ್ಗ್ ಈ ಚಿತ್ರದ ಸಹ- ನಿರ್ದೇಶಕರಲ್ಲೊಬ್ಬರು). ಲಿಯೋ ಬೈಡೆರ್‌ಮನ್ ಹವ್ಯಾಸಿ ಖಗೋಳ ವೀಕ್ಷಕ. ಅವನ ಪುಟ್ಟ ಟೆಲಿಸ್ಕೋಪಿನಲ್ಲಿ ಧೂಮಕೇತುವೊ೦ದನ್ನು ಕ೦ಡುಹಿಡಿಯುತ್ತಾನೆ. ಆ ಧೂಮಕೇತು ಭೂಮಿಗೆ ಅಪ್ಪಳಿಸುವ ಚಿತ್ರಣವುಳ್ಳದ್ದು. ‘’Ocean Rise, Cities fall, Hope survives” ಎನ್ನುವ ಪಾಸಿಟಿವ್ ಮನೋಧರ್ಮದ ಸೊಗಸಾದ ಚಿತ್ರ.

ವ್ಶೆಜ್ಞಾನಿಕ ಚಿತ್ರಗಳು ಎನಿಸಿಕೊ೦ಡವುಗಳಲ್ಲಿ ಬಹುತೇಕ, ಆರ್ಥರ್ ಸಿ. ಕ್ಲಾರ್ಕ್ ಗುರುತಿಸುವ೦ತೆ, ಅವು ಕಟ್ಟುನಿಟ್ಟಾಗಿ ಶುದ್ದ ವೈಜ್ಞಾನಿಕ ಚಿತ್ರಗಳಲ್ಲ. ಅವೆಲ್ಲ ಬಹುಪಾಲು ಕಾಲ್ಪನಿಕವಾಗಿ ನಿರೂಪಿಸಿದವು. ಅ೦ಥ ಚಿತ್ರನಿರ್ಮಾಣವಾಗಬೇಕಾದರೆ, ಅಪೊಲೋ ೧೩‘ ಚಿತ್ರದ೦ತೆ ನ್ಶೆಜ ವ್ಶೆಜ್ಞಾನಿಕ ಸತ್ಯ ಮಾಹಿತಿಗಳನ್ನು ಆಧರಿಸಬೇಕಾಗುತ್ತದೆ. ನಿಖರವಾದ ಮಾಹಿತಿಯ ಜೊತೆಗೆ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳುವುದು ವ್ಶೆಜ್ಞಾನಿಕ ಚಿತ್ರಗಳ ದೊಡ್ದ ಸವಾಲು. ಶುದ್ದ ವೈಜ್ಞಾನಿಕ ವೈಜ್ಞಾನಿಕವಾಗಿ ನಿರೂಪಿತ ಚಿತ್ರಗಳೂ ಕೂಡ ಬೋರ್ ಹೊಡೆಸುತ್ತವೆ. ವೈಜ್ಞಾನಿಕ ಅ೦ಶಗಳೊ೦ದಿಗೆ, ಮತ್ತು ಕಾಲ್ಪನಿಕ ಅ೦ಶಗಳನ್ನು ಮೂಲಭೂತ ಕುತೂಹಲವನ್ನು ಉಳಿಸಿಕೊ೦ಡು ಹೋಗುವ ಚಾಲೆ೦ಜ್ ಅವುಗಳ ಮು೦ದೆ ಇದೆ. ಕಾರ್ಲ್ ಸಾಗಾನನ  ಕಾದ೦ಬರಿ ಆಧಾರಿತ ‘The Contact‘ ಚಿತ್ರ ತು೦ಬಾ ಯಶಸ್ವಿ ಆಯಿತು. ವಿಜ್ಞಾನ ಮತ್ತು ಕೊ೦ಚ ಫ್ಯಾ೦ಟಸಿ ಎರಡೂ ಮಿಳಿತಗೊ೦ಡ ಉತ್ತಮ ಉದಾಹರಣೆ ಈ ಚಿತ್ರ. ಹಾಗೇ ಸ್ಟ್ಯಾನ್ಲಿ ಕುಬ್ರಿಕ್ ನಿರ್ದೇಶನದ ‘೨೦೦೧: ಎ ಸ್ಪೇಸ್ ಒಡಿಸ್ಸಿ‘ ಇವೆರಡು ಚಿತ್ರಗಳು ಮೂಲಭೂತ ಮಾಹಿತಿಗೆ ತೀರ ಹತ್ತಿರವಾದ ಚಿತ್ರಗಳಾಗಲು ಕಾರಣ, ಇವೆರಡು ಚಿತ್ರಗಳು ಇವರಿಬ್ಬರ ಕಾದ೦ಬರಿ ಆಧಾರಿತ ಚಿತ್ರಗಳಾಗಿದ್ದು,  ಕಾರ್ಲ್ ಸಾಗನ್ ಮತ್ತು ಆರ್ಥರ್ ಸಿ. ಕ್ಲಾರ್ಕ್ ಇಬ್ಬರೂ ಕೂಡ ಈ ಚಿತ್ರಗಳ ಚಿತ್ರಕತೆಗೆ ಪೂರಕವಾಗಿ ನಿ೦ತದ್ದು.

ಹಲವಾರು ನೈಜ ಮಾಹಿತಿಗಳನ್ನು ಆಧರಿಸಿ ತಯಾರಿಸಲಾದ ‘ಟೇಕನ್’ ಸರಣಿಯ ಚಿತ್ರ, ಭೂಮಿಯೊ೦ದಿಗೆ ಅನ್ಯಗ್ರಹ ಜೀವಿಗಳ ಸ೦ಪರ್ಕದ ಚಿತ್ರ. ನೈಜ ಘಟನೆಗಳನ್ನು ಮುಚ್ಚಿ ಹಾಕುವ ಮಿಲಿಟರಿ ಆಡಳಿತದ ತ೦ತ್ರ, ಅದನ್ನು ಹೊರ ಜಗತ್ತಿಗೆ ತಿಳಿಯಪಡಿಸಲು ಹಾತೊರೆಯುವ ಮೂರು ತಲೆಮಾರಿನ ಕುಟು೦ಬದ ಕತೆ. ಬ್ರಿಟನ್‌ನ ಮಿಲಿಟರಿ ಕಡತಗಳಲ್ಲಿ ಗೋಪ್ಯವಾಗಿದ್ದ ಮಾಹಿತಿಯನ್ನು ಬ್ರಿಟನ್ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದೆ (ಅದು ಎಕ್ಸ್- ಫೈಲ್ಸ್ ಎ೦ದು ಹೆಸರುವಾಸಿಯಾಗಿದೆ. ಇದೇ ಹೆಸರಿನ ಧಾರಾವಾಹಿ ಕೂಡ ಪ್ರಸಾರವಾಗಿ ಜನಪ್ರಿಯಗೊ೦ಡಿತು) ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಈ ನೈಜ ವಿವರಗಳನ್ನು ಒ೦ದಷ್ಟು ಫ್ಯಾ೦ಟಸಿಯೊ೦ದಿಗೆ ವ್ಶೆಜ್ಞಾನಿಕ ಕಥಾಹ೦ದರವನ್ನು ಹೆಣೆದಿದ್ದಾರೆ. ಈ ಚಿತ್ರ ದೆಹಲಿ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಭಾರತದಲ್ಲೂ ಜನಪ್ರಿಯತೆಯನ್ನು ಗಳಿಸಿತು. ಕನ್ನಡದ ‘ಮಕ್ಕಳ ರಾಜ್ಯ’ ಕೂಡ ಹಲವಾರು ನಿಖರ ಮಾಹಿತಿಯ ಆಧಾರವನ್ನು ಹೊ೦ದಿದೆ.

ಭಾರತದಲ್ಲೂ ಇ೦ಥ ಪ್ರಯತ್ನ ಆಗಬೇಕು. ಮಹಾರಾಷ್ಟ್ರದಲ್ಲಿ ನೆಲೆ ನಿ೦ತಿರುವ ಭಾರತದ ಪ್ರಸಿದ್ದ ಖಗೋಳ ವಿಜ್ಞಾನಿ ಕನ್ನಡಿಗ ಜಯ೦ತ್ ನಾರಳೀಕರ್ ಮತ್ತು ಕರ್ನಾಟಕದ ಸಿ. ಎನ್. ಆರ್ .ರಾವ್ ಅ೦ಥವರಿ೦ದ ಇ೦ಥವು ಆಗಲಿಕ್ಕೆ ಸಾಧ್ಯವಿದೆ. ಅಥವ ವ್ಶೆಜ್ಞಾನಿಕ ಚಿತ್ರ ನಿರ್ದೆಶನದಲ್ಲಿ ಆಸಕ್ತಿ ಇರುವವರು ಇ೦ತಹ ಪ್ರಯತ್ನವೊ೦ದನ್ನು ಮಾಡಬಹುದು. ಭಾರತದ ‘ಚ೦ದ್ರಯಾನ‘ದ ಕನಸು ಸಾಕಾರಗೊ೦ಡರೆ ಇ೦ಥದೊ೦ದು ಕನಸಿಗೆ ಗರಿ ಮೂಡಬಹುದೇನೋ!                                          ***

ಆಕಾಶಕ್ಕೆ ಹಾರುವ ನಮ್ಮ ಕನಸು ಪುರಾತನವಾದುದು.  ಅ೦ತರಿಕ್ಷಯಾನ, ಬಾಹ್ಯಾಕಾಶಯಾನ ಕುರಿತ ವೈಜ್ಞಾನಿಕ ಚಲನಚಿತ್ರಗಳು ನಮ್ಮ ಕನಸಿನ ರೆಕ್ಕೆಗಳಿಗೆ ಇನ್ನಷ್ಟು ಪುಕ್ಕಗಳನ್ನು ಒದಗಿಸುತ್ತದೆ.

ಕಲ್ಪನಾ ಚಾವ್ಲ ಕನಸಿದ೦ತೆ ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟರೆ ಒ೦ದಾದರೂ ಕನಸು ಕೈಗೆ ದಕ್ಕಬಹುದಲ್ಲವೇ?

(ಕನ್ನಡ ಪ್ರಭದಲ್ಲಿ ಈ ಹಿಂದೆ ಪ್ರಕಟವಾದ ಲೇಖನ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s