ಕಿಟಕಿ

ಅಜ್ಜಿಯ ಜಾಣ್ಮೆ  

(ಸರಸ್ವತಿ ಶ್ರೀನಿವಾಸರಾಜು ಅವರ ಕಥಾಲೇಖನ)

ಚಿತ್ರ: ರಿಷಬ್ ಕಾರ್ತಿಕೇಯ

ಕಥೆ ಹೇಳಲು ಅಜ್ಜ ಅಜ್ಜಿ ಇರಬೇಕು. ಅದು ನಮ್ಮ ಮೊಮ್ಮೊಕ್ಕಳ ಆಸೆ. ಅವರಿಗೆ ಎಷ್ಟು ಕಥೆಗಳನ್ನು ಹೇಳಿದರೂ ಸಾಲದು. ನನ್ನ ದೊಡ್ದ ಮೊಮ್ಮೊಗ ಸಾಕಷ್ಟು ಕಥೆಗಳನ್ನು ಅವನ ಅಪ್ಪನಿಂದ ತಿಳಿದಿದ್ದ. ಅಮೆರಿಕದಲ್ಲಿರುವ ಮೊಮ್ಮಗಳಿಗೆ ನನ್ನಿಂದ ಕಥೆ ತಿಳಿಯುವ ಆಸೆ.

ನಾನು ಪ್ರಾರಂಭ ಮಾಡಿದೆ, ರಾಮಾಯಣದ ಕಥೆ. ಆಗಾಗ ಅವಳಿಗೆ ಕಥೆಯ ಅರ್ಥ ಆಗುತ್ತಿರಲಿಲ್ಲ. ಅರ್ಥ ಮಾಡಿಸಲು ನನಗೆ ಸಾಕು ಸಾಕಾಗುತ್ತಿತ್ತು. ನನ್ನ ಸೊಸೆಯ ಸಹಾಯ ಬೇಕಾಗುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಭಾಷೆ. ಹಾಗೂ, ಹೀಗೂ ಸೀತೆಯ ಅಪಹರಣ, ಆಕೆ ಎಸೆದ ಒಡವೆ ಹನುಮಂತನಿಗೆ ಸಿಕ್ಕಿದ್ದು ತಿಳಿದ ಮಗು ಆಕಾಶದಲ್ಲಿ ರಥ ಹೋಗಿದ್ದು ಹೇಗೆ? ಆiಜ ಟಿoಣ Siಣಚಿ ಞಟಿoತಿ ಣhe ಛಿosಣ oಜಿ ಣhe ಎeತಿeಟs? ಎಂದು ಕೇಳಿದಳು. (ಸೀತಾಗೆ ಚಿನ್ನದ ಬೆಲೆ ತಿಳಿದಿರಲಿಲ್ಲವೇ) ಅವಳು ಹಾಗೆನ್ನಲು ಕಾರಣ ಮೊನ್ನೆಯಷ್ಟೇ ಹಬ್ಬಕ್ಕಾಗಿ ಅವಳಿಗೆ ಹಾಕಿದ್ದ ಸರ ಮತ್ತು ಬಳೆ ತೆಗೆದಿಡುವಾಗ, ಪುಟ್ಟಿ ಇವಕ್ಕೆ ಬಹಳ ಬೆಲೆ ಎಂದಳಂತೆ ನನ್ನ ಸೊಸೆ.
ಹಾಗೇ ಅಕ್ಕ ಪಕ್ಕದ ಮಕ್ಕಳು ಬಂದವು. ಮತ್ತೆ ಭಾಷೆಯ ತೊಂದರೆ. ಅಂತೂ ಎಲ್ಲರಿಗೂ ಒಂದು ರೀತಿಯ ಖುಷಿ. ಆಗ ಜೂನ್, ಅಲ್ಲಿ ಶಾಲೆಗೆ ಬೇಸಿಗೆ ರಜ. ಬ್ಯಾಲೆ, ಈಜುವುದು, ಬಣ್ಣದ ಕುಂಚ ಹಾಗೂ ಹಲವಾರು ವಾದ್ಯಗಳನ್ನು ಮರೆತು ಕಥೆ ಕೇಳುವ ಮಕ್ಕಳಿಗೆ ಪಾಪ ತಿಂಡಿ ಕೊಡಲು ಸಾಧ್ಯವಿಲ್ಲ.
ವಾನರ ಸೈನ್ಯ ಸೇತುವೆ ಕಟ್ಟಲು ಪ್ರಾರಂಭಿಸಿತು. ಸೀತೆಯನ್ನು ತರುವುದಕ್ಕಾಗಿ ಬಹಳಷ್ಟು ಪ್ರಯತ್ನ ವಾನರರದು. ಅಷ್ಟರಲ್ಲಿ ಕಥೆ ಆಲಿಸುತ್ತಿದ್ದ ಕೆಲವು ಮಕ್ಕಳು , ವಾನರರನನ್ನೇ ನೋಡಿಲ್ಲ ಎಂದವು. ಕೆಲವು ಮಕ್ಕಳು ಒoಟಿಞeಥಿ ಯನ್ನೇ ವಾನರ ಎಂದು ಸಮಾಧಾನ ಪಟ್ಟವು. ಹೀಗೆ ಕಥೆ ಮುಂದುವರಿಯುತ್ತಿತ್ತು.
ರಾಮ, ಲಕ್ಷ್ಮಣ, ಮತ್ತು ವಾನರರು ಜೊತೆಯಲ್ಲಿರುವಾಗ ಅಳಿಲುಗಳು ಮರಳಿನಲ್ಲಿ ಹೊರಳಾಡಿ ತಂದು ಸೇತುವೆಗೆ ವದರುತ್ತಿದ್ದವು. ವಾನರರ ಜೊತೆ ಅಳಿಲುಗಳ ಕೆಲಸ ಮುಂದುವರೆಸಿತ್ತು. ರಾಮ ಆ ಸಣ್ಣ ಅಳಿಲು ಸೇವೆ ಮಾಡುವುದನ್ನು ಲಕ್ಷ್ಮಣನಿಗೆ ತೋರಿಸಿ, ಒಂದು ಅಳಿಲನ್ನು ಹಿಡಿದು ತರಲು ಹೇಳಿದ. ಆ ಅಳಿಲಿನ ಬೆನ್ನಿನ ಮೇಲೆ ಮೂರು ಬೆರಳುಗಳನ್ನು ರಾಮ ಎಳೆದ. ಆ ದಿನದಿಂದ ಎಲ್ಲ ಅಳಿಲುಗಳ ಬೆನ್ನಿನ ಮೇಲೆ ಮೂರು ಗೆರೆಗಳು ಇರುತ್ತವೆ ಎಂದು ಹೇಳಿದೆ. ಮಕ್ಕಳು ಅಲ್ಲಿ ಬರುವ ಅಳಿಲನ್ನು ನೋಡಲು ಕಾಯುತ್ತಾ ಕುಳಿತವು. ಆದರೆ ಅಳಿಲು ಬರಲಿಲ್ಲ.
ಕಥೆ ಮುಂದುವರೆಯುತ್ತಿತ್ತು. ಅಂತೂ ಒಂದು ದಿನ ಅಳಿಲು ಹೊರಗೆ ಬಂತು. ಎಲ್ಲ ಮಕ್ಕಳು ಕುಣಿದವು. ನನ್ನ ಮೊಮ್ಮೊಗಳು ಓಡಿ ಬಂದು, ಅಜ್ಜಿ ಅಳಿಲ ಮೇಲೆ ಪಟ್ಟಿಯೇ ಇಲ್ಲ ಏಕೆ? ರಾಮ ಅದರ ಮೇಲೆ ಪಟ್ಟಿ ಇಟ್ಟಿಲ್ಲವೇ? ಎಂದಳು. ಆದರೆ ಸ್ವಲ್ಪ ಮಟ್ಟಿಗೆ ದೊಡ್ಡ ಮಕ್ಕಳಿಗೆ ಪ್ರಶ್ನೆ ಉಳಿಯಿತು. ಬೆನ್ನಿನ ಮೇಲೆ ಮೂರು ಪಟ್ಟಿಗಳು! ಅಲ್ಲಿ ಅಳಿಲು ದಪ್ಪಗಿರುವುದರಿಂದ ಆ ಪಟ್ಟಿಗಳು ಸರಿಯಾಗಿ ಕಾಣುತ್ತಿರಲಿಲ್ಲ. ನಾನು ನೋಡಿದಾಗಲೂ ಪಟ್ಟಿ ಕಂಡಿರಲಿಲ್ಲ ನಿಜ. ಅದಕ್ಕಾಗಿ ನಾನು, ’ಇವು ಅಮೇರಿಕ ದ ಅಳಿಲುಗಳು. ನಾನು ಹೇಳಿದ್ದು ಭಾರತದ ಅಳಿಲು’ ಎಂದೆ. ಅಲ್ಲಿಯೇ ನಿಂತಿದ್ದ ನನ್ನ ಸೊಸೆ ಮುಗುಳ್ನಕ್ಕು ಸಮಾಧಾನ ಪಟ್ಟಳು. ಸಧ್ಯ ಮಕ್ಕಳು ರಾಮ ಲಕ್ಷ್ಮಣರು ಮತ್ತು ವಾನರರು ಅಮೆರಿಕಕ್ಕೆ ಬರಲಿಲ್ಲವೇ ? ಎಂದು ಕೇಳಲಿಲ್ಲ !
       – ಶ್ರೀಮತಿ.   ಸರಸ್ವತಿ ಶ್ರೀನಿವಾಸರಾಜು

*******

                          

ಜ್ಯೋತಿ ಉರಿಯುವುದು ಹಾಡಾಗಿ         

ಜಿ.ಪಿ ಬಸವರಾಜು ಅವರ ಎರಡು ಕವಿತೆಗಳು

ಹಾಡುವುದೆಂದರೆ

ಗೆಳೆಯ
ಸ್ವರಕ್ಕೆ ಸ್ವರ ಕೂಡಿಸುವುದಲ್ಲ;

ಉಸಿರ ಹಿಡಿದೆಳೆದು
ಎಳೆಎಳೆಯಾಗಿ
ಕಟ್ಟಬೇಕು, ಮತ್ತೆ ಬಿಚ್ಚಬೇಕು;

ಧ್ಯಾನಕೇಂದ್ರದಲ್ಲಿ
ಕದಲದೆ ನಿಂತು
ಮಹಾಯೋಗಿಯಾಗಬೇಕು
ಏಕಾಗ್ರತೆಯಲ್ಲಿ ಸ್ವರದ ಜೊತೆ
ಒಂದಾಗಬೇಕು
ಒಂದೇ ಆಗಬೇಕು

ಕತ್ತಲ ಗುಹೆಯಲ್ಲಿ ತೆವಳುತ್ತ
ದಾರಿಯ ಹುಡುಕಬೇಕು
ಒಳ-ಹೊರಗುಗಳ ಅಳಿಸುತ್ತ
ಒಡಲ ಜ್ಯೋತಿಯನು
ಹಿಡಿಯಬೇಕು
ಹಿಡಿದಾಡಬೇಕು, ಹಾಡಬೇಕು;

ನರನರವ ಹುರಿಮಾಡಿ
ಸ್ವರವ ಶ್ರುತಿಮಾಡಿ
ಏರಬೇಕು ಇಷ್ಟಿಷ್ಟೆ ಎತ್ತರವ
ಸಿಕ್ಕಂತೆ ಮಹಾ ಶಿಖರವ

ರವರವವು ಕರಗಿ
ಸ್ವರವೆ ಹತ್ತಿ ಉರಿಯಬೇಕು
ಆ ಉರಿಯಲ್ಲಿ
ನೀನು ನಾನು ನಾವು
ಬೇಯಬೇಕು

ಆಗ
ನೀನಿಲ್ಲ ನಾನಿಲ್ಲ
ನಾವ್ಯಾರೂ ಇಲ್ಲ
ನಿಗಿನಿಗಿ ಜ್ಯೋತಿ
ಉರಿಯುವುದು ಹಾಡಾಗಿ
ಲೋಕ ಕರಗುವುದು ತಾನಾಗಿ

****

ಕರುಣಾಳು

 

 

 

 

 

ಒಂದು ಪುಟ್ಟ

ಹುಳುವನ್ನು
ಪುಟಾಣಿ ಗುಬ್ಬಚ್ಚಿ
ತನ್ನ ಕೊಕ್ಕಲ್ಲಿ ಹಿಡಿದು
ಹಾರಿಬಂತು ಗೂಡಿಗೆ

ಬಾಯನ್ನು
ಬ್ರಹ್ಮಾಂಡದಂತೆ
ತೆರೆದು
ತಾಯ ತುತ್ತನ್ನು
ನುಂಗಿದವು ಮರಿ

ಹುಳುವನ್ನು
ತಾಯಿಯನ್ನು
ಮರಿಗಳನ್ನು
ಹಾಗೆಯೇ ನೋಡುತ್ತ
ನಿಂತ ಕರುಣಾಳು
ಬುದ್ಧನ ಕಣ್ಣುಗಳು
ಮಾತಿಲ್ಲದೆ ಹನಿದವು

ಶ್ರೀ. ಜಿ.  ಪಿ  ಬಸವರಾಜು

   

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s