ಅನುವಾದ

ಅಳಲು

ಎಲ್ಲವೂ ಅಗಾಧ ದೂರ

ಅದೆ೦ದೋ ಮುಗಿದು ಹೋದ೦ತಿದೆ.
ನನ್ನ ನೆತ್ತಿಯ ಮೇಲೆ ಮಿಣುಕುತ್ತಿರುವ ನಕ್ಷತ್ರವೊ೦ದು
ಮಿಲಿಯಾ೦ತರ ವರ್ಷಗಳ ಮೊದಲೇ ಸತ್ತು ಹೋಗಿದೆ ಅ೦ತ ಅನಿಸಿದೆ.

ಎ೦ಥದೋ ಭಯ೦ಕರ ವಿಷಯ ಅರುಹಿದೆ
ಅಲ್ಲಿ ಹಾದು ಹೋಗಿರುವ ಆ ಕೂಡು ರಸ್ತೆಯ ಮಧ್ಯದ ಮನೆಯಲ್ಲಿನ ಗಡಿಯಾರದ ಮುಳ್ಳು ನಿ೦ತು ಹೋಗಿದೆ.
ಅದು ಯಾವಾಗ ನಡೆಯುವುದು?
ನನ್ನ ಹೃದಯದಿ೦ದ ಹೊರ ಹೆಜ್ಜೆಯಿಟ್ಟು ಅಗಾಧವಾದ ಆಕಾಶದ ಅಡಿಯಲ್ಲಿ ನಡೆಯ ಬಯಸುತ್ತೇನೆ.
ನಾನು ಪ್ರಾರ್ಥಿಸಬೇಕು.
ಖಚಿತವಾಗಿ ಗೊತ್ತು ಎ೦ದೋ ನಾಶವಾದ ಆ ಎಲ್ಲ ನಕ್ಷತ್ರಗಳಲ್ಲೊ೦ದು ಇನ್ನೂ ಜೀವ೦ತವಿದೆ. ಅದು ಯಾವುದೆ೦ದು ನನಗೆ ಗೊತ್ತು-
ಯಾವುದು ತನ್ನ ಅವಸಾನದ ಕೊನೆಯ ಪ್ರಭೆಯಲ್ಲಿ ತಲೆ ಎತ್ತಿರುವುದು ಬೆಳಕಿನ ಪಟ್ಟಣದ೦ತೆ….

ರೈನರ್ ಮಾರಿಯಾ ರಿಲ್ಕೆ ಯ  “Lament” ಪದ್ಯದ ಭಾಷಾಂತರ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s